Hanuman Chalisa

|| ಶ್ರೀ ||

Hanuman Chalisa

ಹನುಮಾನ್ ಚಾಲೀಸಾ

ಗೋಸ್ವಾಮಿ ತುಲಸೀದಾಸ ವಿರಚಿತ ಹನುಮಂತನ ನಲವತ್ತು ಚೌಪಾಯಿಗಳು. ಮಂಗಳವಾರ ಮತ್ತು ಶನಿವಾರ ಪಠಿಸುವುದು ವಿಶೇಷ. ಪ್ರತಿ ಪದ್ಯದ ಕೆಳಗೆ ಅರ್ಥವನ್ನು ನೀಡಲಾಗಿದೆ.

The forty verses of Hanuman by Goswami Tulasidas, recited especially on Tuesdays and Saturdays. A simple meaning is given under every verse.

ದೋಹಾ · Opening Doha

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ವರಣೌ ರಘುವರ ವಿಮಲ ಯಶ ಜೋ ದಾಯಕ ಫಲಚಾರಿ ||

sri guru carana saroja raja nijamana mukura sudhari varanau raghuvara vimala yasa jo dayaka phalacari ||

ಅರ್ಥ · Meaning

ನನ್ನ ಶ್ರೀ ಗುರುವಿನ ಪಾದಕಮಲಗಳ ಧೂಳಿನಿಂದ ನನ್ನ ಮನಸ್ಸನ್ನುವ ಕನ್ನಡಿಯನ್ನು ಸ್ವಚ್ಛಗೊಳಿಸಿ (ಶುದ್ಧಿಗೊಳಿಸಿ), ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಫಲಗಳನ್ನು ನೀಡುವ ಅಂತಹ ರಘುವಂಶದ ಶ್ರೇಷ್ಠನಾದ ಶ್ರೀರಾಮನ ನಿರ್ಮಲವಾದ ಕೀರ್ತಿಯನ್ನು ವರ್ಣಿಸುತ್ತೇನೆ.

I cleanse the mirror of my mind with the dust of my Guru's lotus feet and sing the pure glory of Raghuvara, bestower of the four fruits of life.

ಬುದ್ಧಿಹೀನ ತನು ಜಾನಿಕೇ ಸುಮಿರೌ ಪವನಕುಮಾರ ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ||

buddhihina tanu janike sumirau pavanakumara bala buddhi vidya dehu mohi harahu kalesa vikara ||

ಅರ್ಥ · Meaning

ನಾನು ಬುದ್ಧಿಹೀನನೆಂದು ತಿಳಿದು, ಪವನಪುತ್ರನಾದ ಹನುಮಂತನನ್ನು ಸ್ಮರಿಸುತ್ತೇನೆ. ಎಲೈ ಹನುಮಂತನೇ, ನನಗೆ ಬಲ, ಬುದ್ಧಿ ಮತ್ತು ವಿದ್ಯೆಯನ್ನು ನೀಡು ಹಾಗೂ ನನ್ನಲ್ಲಿರುವ ಸಕಲ ಕಷ್ಟಗಳನ್ನು ಮತ್ತು ಮನಸ್ಸಿನ ವಿಕಾರಗಳನ್ನು (ದೋಷಗಳನ್ನು) ದೂರ ಮಾಡು.

Knowing myself dull-witted, I invoke the son of the wind: grant me strength, wisdom and knowledge, and remove my sorrows and blemishes.

ಚೌಪಾಈ · Chaupais

ಜಯ ಹನುಮಾನ ಜ್ಞಾನಗುಣಸಾಗರ | ಜಯ ಕಪೀಶ ತಿಹು ಲೋಕ ಉಜಾಗರ || ೧ ||

jaya hanumana jnanagunasagara | jaya kapisa tihu loka ujagara || 1 ||

ಅರ್ಥ · Meaning

ಜ್ಞಾನ ಮತ್ತು ಗುಣಗಳ ಸಾಗರನಾದ ಹನುಮಂತನಿಗೆ ಜಯವಾಗಲಿ. ಮೂರೂ ಲೋಕಗಳಲ್ಲಿ ಪ್ರಖ್ಯಾತನಾದ ವಾನರ ಶ್ರೇಷ್ಠನಿಗೆ ಜಯವಾಗಲಿ.

Victory to Hanuman, ocean of wisdom and virtue; victory to the lord of the vanaras, illuminator of the three worlds.

ರಾಮದೂತ ಅತುಲಿತ ಬಲಧಾಮಾ | ಅಂಜನಿಪುತ್ರ ಪವನಸುತ ನಾಮಾ || ೨ ||

ramaduta atulita baladhama | amjaniputra pavanasuta nama || 2 ||

ಅರ್ಥ · Meaning

ನೀನು ಶ್ರೀರಾಮನ ದೂತ ಹಾಗೂ ಅಪ್ರತಿಮ ಬಲದ ಆವಾಸಸ್ಥಾನ (ಮನೆ). ಅಂಜನಾದೇವಿಯ ಪುತ್ರನಾದ ನಿನ್ನನ್ನು ‘ಪವನಸುತ’ (ವಾಯುಪುತ್ರ) ಎಂಬ ಹೆಸರಿನಿಂದ ಕರೆಯುತ್ತಾರೆ.

You are Rama's messenger and the abode of matchless strength — Anjani's son, called Pavanasuta.

ಮಹಾವೀರ ವಿಕ್ರಮ ಬಜರಂಗೀ | ಕುಮತಿ ನಿವಾರ ಸುಮತಿ ಕೇ ಸಂಗೀ || ೩ ||

mahavira vikrama bajaramgi | kumati nivara sumati ke samgi || 3 ||

ಅರ್ಥ · Meaning

ಮಹಾವೀರನಾದ, ಪರಾಕ್ರಮಿಯಾದ ನಿನ್ನ ದೇಹವು ವಜ್ರದಂತೆ ಕಠಿಣವಾಗಿದೆ (ಬಜರಂಗಿ). ನೀನು ಕೆಟ್ಟ ಬುದ್ಧಿಯನ್ನು ದೂರ ಮಾಡುವವನು ಮತ್ತು ಒಳ್ಳೆಯ ಬುದ್ಧಿಯುಳ್ಳವರ ಒಡನಾಡಿಯಾಗಿದ್ದೀಯೆ.

Great hero, mighty as the vajra, you remove evil thoughts and befriend good sense.

ಕಂಚನ ವರಣ ವಿರಾಜ ಸುವೇಶಾ | ಕಾನನ ಕುಂಡಲ ಕುಂಚಿತ ಕೇಶಾ || ೪ ||

kamcana varana viraja suvesa | kanana kumdala kumcita kesa || 4 ||

ಅರ್ಥ · Meaning

ನೀನು ಬಂಗಾರದ ಬಣ್ಣದ ಮೈಕಾಂತಿಯಿಂದ ಶೋಭಿಸುತ್ತಿದ್ದೀಯೆ ಮತ್ತು ಸುಂದರವಾದ ಉಡುಪನ್ನು ಧರಿಸಿದ್ದೀಯೆ. ನಿನ್ನ ಕಿವಿಯಲ್ಲಿ ಕುಂಡಲಗಳು ಹೊಳೆಯುತ್ತಿವೆ ಮತ್ತು ನಿನ್ನ ಕೇಶರಾಶಿಯು ಸುರುಳಿಯಾಗಿದೆ.

Golden-hued and splendidly dressed, with handsome earrings and curly hair.

ಹಾಥ ವಜ್ರ ಔರು ಧ್ವಜಾ ವಿರಾಜೈ | ಕಾಂಧೇ ಮೂಂಜ ಜನೇವೂ ಸಾಜೈ || ೫ ||

hatha vajra auru dhvaja virajai | kamdhe mumja janevu sajai || 5 ||

ಅರ್ಥ · Meaning

ನಿನ್ನ ಕೈಗಳಲ್ಲಿ ವಜ್ರಾಯುಧ ಮತ್ತು ಧ್ವಜವು ಶೋಭಿಸುತ್ತಿವೆ. ನಿನ್ನ ಹೆಗಲ ಮೇಲೆ ‘ಮೂಂಜ’ ಎಂಬ ಹುಲ್ಲಿನಿಂದ ತಯಾರಿಸಿದ ಜನಿವಾರವು ರಾರಾಜಿಸುತ್ತಿದೆ.

The mace and banner shine in your hands; the munja sacred thread adorns your shoulder.

ಶಂಕರ ಸುವನ ಕೇಸರೀನಂದನ | ತೇಜ ಪ್ರತಾಪ ಮಹಾ ಜಗವಂದನ || ೬ ||

samkara suvana kesarinamdana | teja pratapa maha jagavamdana || 6 ||

ಅರ್ಥ · Meaning

ನೀನು ಶಿವನ ಅಂಶದವನು (ಅಂಶಾವತಾರ) ಮತ್ತು ಕೇಸರಿಯ ಮಗನು. ನಿನ್ನ ತೇಜಸ್ಸು ಮತ್ತು ಪರಾಕ್ರಮವು ಈ ಜಗತ್ತಿನಿಂದಲೇ ಪೂಜಿಸಲ್ಪಡುತ್ತಿದೆ.

Blessed of Shiva and son of Kesari, your radiance and majesty are revered by the whole world.

ವಿದ್ಯಾವಾನ ಗುಣೀ ಅತಿಚಾತುರ | ರಾಮ ಕಾಜ ಕರಿವೇ ಕೋ ಆತುರ || ೭ ||

vidyavana guni aticatura | rama kaja karive ko atura || 7 ||

ಅರ್ಥ · Meaning

ನೀನು ಮಹಾ ವಿದ್ವಾಂಸನು, ಗುಣವಂತನು ಮತ್ತು ಅತ್ಯಂತ ಚತುರನು. ಶ್ರೀರಾಮನ ಕಾರ್ಯಗಳನ್ನು ಪೂರೈಸಲು ನೀನು ಸದಾ ಕಾತರನಾಗಿರುತ್ತೀಯೆ.

Supremely learned, virtuous and wise, ever eager to carry out Rama's work.

ಪ್ರಭು ಚರಿತ್ರ ಸುನಿವೇ ಕೋ ರಸಿಯಾ | ರಾಮ ಲಖನ ಸೀತಾ ಮನ ಬಸಿಯಾ || ೮ ||

prabhu caritra sunive ko rasiya | rama lakhana sita mana basiya || 8 ||

ಅರ್ಥ · Meaning

ಶ್ರೀರಾಮನ ಚರಿತ್ರೆಯನ್ನು ಕೇಳುವುದರಲ್ಲಿ ನೀನು ಆನಂದ ಪಡುತ್ತೀಯೆ. ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆಯು ಸದಾ ನಿನ್ನ ಹೃದಯದಲ್ಲಿ ನೆಲೆಸಿದ್ದಾರೆ.

You delight in hearing the Lord's deeds; Rama, Lakshmana and Sita dwell in your heart.

ಸೂಕ್ಷ್ಮರೂಪ ಧರಿ ಸಿಯಹಿ ದಿಖಾವಾ | ವಿಕಟರೂಪ ಧರಿ ಲಂಕ ಜರಾವಾ || ೯ ||

suksmarupa dhari siyahi dikhava | vikatarupa dhari lamka jarava || 9 ||

ಅರ್ಥ · Meaning

ಲಂಕೆಯಲ್ಲಿ ನೀನು ಅತ್ಯಂತ ಚಿಕ್ಕ (ಸೂಕ್ಷ್ಮ) ರೂಪವನ್ನು ಧರಿಸಿ ಸೀತಾದೇವಿಗೆ ಕಾಣಿಸಿಕೊಂಡೆ. ಆದರೆ ಲಂಕೆಯನ್ನು ಸುಡುವಾಗ ಭೀಕರವಾದ (ವಿಕಟ) ರೂಪವನ್ನು ತಾಳಿದೆ.

In subtle form you appeared before Sita; in fearsome form you burnt Lanka.

ಭೀಮರೂಪ ಧರಿ ಅಸುರ ಸಂಹಾರೇ | ರಾಮಚಂದ್ರ ಕೇ ಕಾಜ ಸಂವಾರೇ || ೧೦ ||

bhimarupa dhari asura samhare | ramacamdra ke kaja samvare || 10 ||

ಅರ್ಥ · Meaning

ಅತ್ಯಂತ ಬೃಹತ್ (ಭೀಮ) ರೂಪವನ್ನು ತಾಳಿ ರಾಕ್ಷಸರನ್ನು ಸಂಹರಿಸಿದೆ ಮತ್ತು ಈ ಮೂಲಕ ಶ್ರೀರಾಮಚಂದ್ರನ ಸಕಲ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಿದೆ.

In mighty form you destroyed the demons and fulfilled Sri Rama's mission.

ಲಾಯ ಸಂಜೀವನ ಲಖನ ಜಿಯಾಯೇ | ಶ್ರೀರಘುವೀರ ಹರಷಿ ವುರ ಲಾಯೇ || ೧೧ ||

laya samjivana lakhana jiyaye | sriraghuvira harasi vura laye || 11 ||

ಅರ್ಥ · Meaning

ನೀನು ಸಂಜೀವಿನಿ ಮೂಲಿಕೆಯನ್ನು ತಂದು ಲಕ್ಷ್ಮಣನ ಪ್ರಾಣವನ್ನು ಉಳಿಸಿದೆ. ಇದರಿಂದ ಅತ್ಯಂತ ಹರ್ಷಗೊಂಡ ಶ್ರೀರಾಮಚಂದ್ರನು ನಿನ್ನನ್ನು ಪ್ರೀತಿಯಿಂದ ಅಪ್ಪಿಕೊಂಡನು.

Bringing the sanjivini you revived Lakshmana, and Sri Rama embraced you in joy.

ರಘುಪತಿ ಕೀನ್ಹೀ ಬಹುತ ಬಡಾಯೀ | ತುಮ ಮಮ ಪ್ರಿಯ ಭರತ ಸಮ ಭಾಯೀ || ೧೨ ||

raghupati kinhi bahuta badayi | tuma mama priya bharata sama bhayi || 12 ||

ಅರ್ಥ · Meaning

ರಘುಪತಿಯಾದ ಶ್ರೀರಾಮನು ನಿನ್ನನ್ನು ಬಹುವಾಗಿ ಶ್ಲಾಘಿಸಿದನು. “ನೀನು ನನಗೆ ನನ್ನ ತಮ್ಮನಾದ ಭರತನಷ್ಟೇ ಪ್ರಿಯನಾದವನು” ಎಂದು ರಾಮನು ನಿನ್ನನ್ನು ಹೊಗಳಿದನು.

The Lord of Raghus praised you greatly: 'You are as dear to me as my brother Bharata.'

ಸಹಸ ವದನ ತುಮ್ಹರೋ ಯಶ ಗಾವೈ | ಅಸ ಕಹಿ ಶ್ರೀಪತಿ ಕಂಠ ಲಗಾವೈ || ೧೩ ||

sahasa vadana tumharo yasa gavai | asa kahi sripati kamtha lagavai || 13 ||

ಅರ್ಥ · Meaning

“ಸಾವಿರ ಮುಖವುಳ್ಳ ಆದಿಶೇಷನು ನಿನ್ನ ಕೀರ್ತಿಯನ್ನು ಹಾಡುತ್ತಾನೆ” ಎಂದು ಹೇಳುತ್ತಾ ಶ್ರೀಪತಿಯಾದ ರಾಮನು ನಿನ್ನನ್ನು ಗಾಢವಾಗಿ ಆಲಂಗಿಸಿಕೊಂಡನು.

'The thousand-mouthed serpent shall sing your glory' — so saying, the Lord of Lakshmi drew you to himself.

ಸನಕಾದಿಕ ಬ್ರಹ್ಮಾದಿ ಮುನೀಶಾ | ನಾರದ ಶಾರದ ಸಹಿತ ಅಹೀಶಾ || ೧೪ ||

sanakadika brahmadi munisa | narada sarada sahita ahisa || 14 ||

ಅರ್ಥ · Meaning

ಸನಕಾದಿ ಮುನಿಗಳು, ಬ್ರಹ್ಮಾದಿ ದೇವತೆಗಳು, ನಾರದರು, ಸರಸ್ವತಿ ದೇವಿ ಮತ್ತು ಆದಿಶೇಷನು ಸಹ ನಿನ್ನ ಮಹಿಮೆಯನ್ನು ವರ್ಣಿಸಲು ಅಶಕ್ತರಾಗಿದ್ದಾರೆ (ಅಂದರೆ ನಿನ್ನ ಮಹಿಮೆ ಅಷ್ಟು ಅಪಾರ).

Sanaka and the sages, Brahma and the munis, Narada, Saraswati and the king of serpents —

ಯಮ ಕುಬೇರ ದಿಗಪಾಲ ಜಹಾಂ ತೇ | ಕವಿ ಕೋವಿದ ಕಹಿ ಸಕೇ ಕಹಾಂ ತೇ || ೧೫ ||

yama kubera digapala jaham te | kavi kovida kahi sake kaham te || 15 ||

ಅರ್ಥ · Meaning

ಯಮಧರ್ಮರಾಜ, ಕುಬೇರ ಮತ್ತು ದಿಕ್ಪಾಲಕರು ಕೂಡ ನಿನ್ನನ್ನು ಸ್ತುತಿಸುತ್ತಾರೆ. ಇನ್ನು ಸಾಮಾನ್ಯ ಕವಿಗಳು ಮತ್ತು ಪಂಡಿತರು ನಿನ್ನ ಕೀರ್ತಿಯನ್ನು ಪೂರ್ಣವಾಗಿ ವರ್ಣಿಸಲು ಹೇಗೆ ತಾನೇ ಸಾಧ್ಯ?

Yama, Kubera and the guardians of the quarters, poets and scholars — none can voice your full glory.

ತುಮ ಉಪಕಾರ ಸುಗ್ರೀವಹಿ ಕೀನ್ಹಾ | ರಾಮ ಮಿಲಾಯ ರಾಜ ಪದ ದೀನ್ಹಾ || ೧೬ ||

tuma upakara sugrivahi kinha | rama milaya raja pada dinha || 16 ||

ಅರ್ಥ · Meaning

ನೀನು ಸುಗ್ರೀವನಿಗೆ ಮಹತ್ತರವಾದ ಉಪಕಾರ ಮಾಡಿದೆ. ಅವನನ್ನು ಶ್ರೀರಾಮನಿಗೆ ಪರಿಚಯಿಸಿ, ಅವನಿಗೆ ಮರಳಿ ರಾಜ್ಯ ಸಿಗುವಂತೆ (ರಾಜ ಪದವಿ) ಮಾಡಿದೆ.

You rendered Sugriva a mighty service, uniting him with Rama and restoring his throne.

ತುಮ್ಹರೋ ಮಂತ್ರ ವಿಭೀಷಣ ಮಾನಾ | ಲಂಕೇಶ್ವರ ಭಯ ಸಬ ಜಗ ಜಾನಾ || ೧೭ ||

tumharo mamtra vibhisana mana | lamkesvara bhaya saba jaga jana || 17 ||

ಅರ್ಥ · Meaning

ನಿನ್ನ ಉಪದೇಶವನ್ನು (ಮಂತ್ರ) ವಿಭೀಷಣನು ಪಾಲಿಸಿದನು, ಆ ಕಾರಣದಿಂದಲೇ ಅವನು ಲಂಕೆಯ ರಾಜನಾದನು ಎಂಬ ವಿಷಯ ಇಡೀ ಜಗತ್ತಿಗೆ ತಿಳಿದಿದೆ.

Vibhishana heeded your counsel and became lord of Lanka — all the world knows this.

ಯುಗ ಸಹಸ್ರ ಯೋಜನ ಪರ ಭಾನೂ | ಲೀಲ್ಯೋ ತಾಹಿ ಮಧುರ ಫಲ ಜಾನೂ || ೧೮ ||

yuga sahasra yojana para bhanu | lilyo tahi madhura phala janu || 18 ||

ಅರ್ಥ · Meaning

ಸಾವಿರಾರು ಯೋಜನ ದೂರದಲ್ಲಿದ್ದ ಸೂರ್ಯನನ್ನು ನೀನು ಒಂದು ಸಿಹಿಯಾದ ಹಣ್ಣೆಂದು ಭಾವಿಸಿ ನುಂಗಲು ಹಾರಿದ್ದೆ. (ಇದು ಹನುಮಂತನ ಬಾಲ್ಯದ ಪರಾಕ್ರಮವನ್ನು ಸೂಚಿಸುತ್ತದೆ).

The sun, thousands of yojanas away, you swallowed, mistaking it for a sweet fruit.

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ | ಜಲಧಿ ಲಾಂಘಿ ಗಯೇ ಅಚರಜ ನಾಹೀ || ೧೯ ||

prabhu mudrika meli mukha mahi | jaladhi lamghi gaye acaraja nahi || 19 ||

ಅರ್ಥ · Meaning

ಶ್ರೀರಾಮನ ಮುದ್ರಿಕೆಯನ್ನು (ಉಂಗುರ) ಬಾಯಿಯಲ್ಲಿ ಇಟ್ಟುಕೊಂಡು ನೀನು ನೂರು ಯೋಜನ ವಿಸ್ತಾರದ ಸಮುದ್ರವನ್ನು ಹಾರಿ ದಾಟಿದೆ. ನಿನ್ನಂತಹ ಶಕ್ತನಿಗೆ ಇದರಲ್ಲಿ ಆಶ್ಚರ್ಯವೇನೂ ಇಲ್ಲ.

Holding the Lord's ring in your mouth you leapt the ocean — small wonder for you.

ದುರ್ಗಮ ಕಾಜ ಜಗತ ಕೇ ಜೇತೇ | ಸುಗಮ ಅನುಗ್ರಹ ತುಮ್ಹರೇ ತೇತೇ || ೨೦ ||

durgama kaja jagata ke jete | sugama anugraha tumhare tete || 20 ||

ಅರ್ಥ · Meaning

ಈ ಜಗತ್ತಿನಲ್ಲಿ ಮಾಡಲು ಅಸಾಧ್ಯವೆನಿಸುವ (ದುರ್ಗಮ) ಕೆಲಸಗಳೆಲ್ಲವೂ ನಿನ್ನ ಅನುಗ್ರಹವಿದ್ದರೆ ಅತ್ಯಂತ ಸುಲಭವಾಗಿ (ಸುಗಮ) ನೆರವೇರುತ್ತವೆ.

Every difficult task in this world becomes light through your grace.

ರಾಮ ದುವಾರೇ ತುಮ ರಖವಾರೇ | ಹೋತ ನ ಆಜ್ಞಾ ಬಿನು ಪೈಸಾರೇ || ೨೧ ||

rama duvare tuma rakhavare | hota na ajna binu paisare || 21 ||

ಅರ್ಥ · Meaning

ಶ್ರೀರಾಮನ ದ್ವಾರಕ್ಕೆ ನೀನೇ ಕಾವಲುಗಾರ (ರಕ್ಷಕ). ನಿನ್ನ ಅನುಮತಿ ಇಲ್ಲದೆ ಯಾರೂ ರಾಮನ ಸನ್ನಿಧಿಯನ್ನು ಪ್ರವೇಶಿಸಲು ಸಾಧ್ಯವಿಲ್ಲ. (ಅಂದರೆ ರಾಮನ ಕೃಪೆ ಪಡೆಯಲು ಹನುಮಂತನ ಕೃಪೆ ಮೊದಲು ಬೇಕು).

You are the keeper of Rama's door; none may enter without your leave.

ಸಬ ಸುಖ ಲಹೈ ತುಮ್ಹಾರೀ ಶರಣಾ | ತುಮ ರಕ್ಷಕ ಕಾಹೂ ಕೋ ಡರನಾ || ೨೨ ||

saba sukha lahai tumhari sarana | tuma raksaka kahu ko darana || 22 ||

ಅರ್ಥ · Meaning

ನಿನ್ನ ಶರಣು ಬಂದವರಿಗೆ ಸಕಲ ಸುಖಗಳೂ ಲಭಿಸುತ್ತವೆ. ನೀನೇ ರಕ್ಷಕನಾಗಿರುವಾಗ ಯಾರಿಗೂ ಹೆದರುವ ಅವಶ್ಯಕತೆಯೇ ಇಲ್ಲ.

Those in your refuge know every happiness; with you as guardian, whom should one fear?

ಆಪನ ತೇಜ ಸಂಹಾರೋ ಆಪೈ | ತೀನೋಂ ಲೋಕ ಹಾಂಕ ತೇಂ ಕಾಂಪೈ || ೨೩ ||

apana teja samharo apai | tinom loka hamka tem kampai || 23 ||

ಅರ್ಥ · Meaning

ನಿನ್ನ ಅಪಾರವಾದ ತೇಜಸ್ಸನ್ನು ನಿಯಂತ್ರಿಸಲು ನಿನಗೆ ಮಾತ್ರ ಸಾಧ್ಯ. ನೀನು ಒಮ್ಮೆ ಸಿಂಹಗರ್ಜನೆ ಮಾಡಿದರೆ ಸಾಕು, ಮೂರೂ ಲೋಕಗಳು ನಡುಗುತ್ತವೆ.

You alone contain your own splendour; the three worlds tremble at your single roar.

ಭೂತ ಪಿಶಾಚ ನಿಕಟ ನಹಿಂ ಆವೈ | ಮಹಾವೀರ ಜಬ ನಾಮ ಸುನಾವೈ || ೨೪ ||

bhuta pisaca nikata nahim avai | mahavira jaba nama sunavai || 24 ||

ಅರ್ಥ · Meaning

“ಮಹಾವೀರ” ಎಂಬ ನಿನ್ನ ನಾಮವನ್ನು ಜಪಿಸಿದರೆ ಸಾಕು, ಭೂತ-ಪ್ರೇತ-ಪಿಶಾಚಿಗಳಂತಹ ದುಷ್ಟ ಶಕ್ತಿಗಳು ಹತ್ತಿರ ಸುಳಿಯುವುದಕ್ಕೂ ಹೆದರುತ್ತವೆ.

Ghosts and goblins come nowhere near when 'Mahavira' — your name — is uttered.

ನಾಸೈ ರೋಗ ಹರೈ ಸಬ ಪೀರಾ | ಜಪತ ನಿರಂತರ ಹನುಮತ ವೀರಾ || ೨೫ ||

nasai roga harai saba pira | japata niramtara hanumata vira || 25 ||

ಅರ್ಥ · Meaning

ನಿರಂತರವಾಗಿ ಹನುಮಂತನ ನಾಮವನ್ನು ಜಪಿಸುವ ಭಕ್ತರ ಸಮಸ್ತ ರೋಗಗಳು ನಾಶವಾಗುತ್ತವೆ ಮತ್ತು ಅವರ ಎಲ್ಲಾ ನೋವುಗಳೂ ದೂರವಾಗುತ್ತವೆ.

Every disease is destroyed, every pain removed, by the constant repetition of brave Hanuman's name.

ಸಂಕಟಸೇ ಹನುಮಾನ ಛುಡಾವೈ | ಮನ ಕ್ರಮ ವಚನ ಧ್ಯಾನ ಜೋ ಲಾವೈ || ೨೬ ||

samkatase hanumana chudavai | mana krama vacana dhyana jo lavai || 26 ||

ಅರ್ಥ · Meaning

ಮನಸ್ಸು, ಕೆಲಸ (ಕರ್ಮ) ಮತ್ತು ಮಾತುಗಳಿಂದ ಯಾರು ಹನುಮಂತನನ್ನು ಶ್ರದ್ಧೆಯಿಂದ ಧ್ಯಾನಿಸುತ್ತಾರೋ, ಅವರನ್ನು ಹನುಮಂತನು ಸಕಲ ಸಂಕಷ್ಟಗಳಿಂದ ಪಾರುಮಾಡುತ್ತಾನೆ.

Hanuman releases from all troubles those who remember him in thought, word and deed.

ಸಬ ಪರ ರಾಮ ತಪಸ್ವೀ ರಾಜಾ | ತಿನ ಕೇ ಕಾಜ ಸಕಲ ತುಮ ಸಾಜಾ || ೨೭ ||

saba para rama tapasvi raja | tina ke kaja sakala tuma saja || 27 ||

ಅರ್ಥ · Meaning

ತಪಸ್ವಿಗಳಲ್ಲಿ ಶ್ರೇಷ್ಠನಾದ ರಾಜ ರಾಮಚಂದ್ರನೇ ಎಲ್ಲರಿಗೂ ಅಧಿಪತಿ. ಅಂತಹ ರಾಮನ ಕಠಿಣವಾದ ಕಾರ್ಯಗಳನ್ನೆಲ್ಲಾ ನೀನೇ ಸುಲಭವಾಗಿ ಪೂರೈಸಿಕೊಟ್ಟಿದ್ದೀಯೆ.

Rama the ascetic king reigns supreme over all, and you carried out all his works.

ಔರ ಮನೋರಥ ಜೋ ಕೋಯೀ ಲಾವೈ | ತಾಸು ಅಮಿತ ಜೀವನ ಫಲ ಪಾವೈ || ೨೮ ||

aura manoratha jo koyi lavai | tasu amita jivana phala pavai || 28 ||

ಅರ್ಥ · Meaning

ಯಾರಾದರೂ ತಮ್ಮ ಮನದ ಆಸೆಯನ್ನು (ಮನೋರಥ) ನಿನ್ನ ಮುಂದೆ ತೋಡಿಕೊಂಡರೆ, ಅವರು ಜೀವನದ ಅಮಿತವಾದ (ಅಪಾರವಾದ) ಫಲಗಳನ್ನು ಪಡೆದುಕೊಳ್ಳುತ್ತಾರೆ.

Whoever brings any longing to you receives the boundless fruit of life.

ಚಾರೋಂ ಯುಗ ಪ್ರತಾಪ ತುಮ್ಹಾರಾ | ಹೈ ಪರಸಿದ್ಧ ಜಗತ ಉಜಿಯಾರಾ || ೨೯ ||

carom yuga pratapa tumhara | hai parasiddha jagata ujiyara || 29 ||

ಅರ್ಥ · Meaning

ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಎಂಬ ನಾಲ್ಕೂ ಯುಗಗಳಲ್ಲಿ ನಿನ್ನ ಪ್ರತಾಪವು ಹರಡಿದೆ. ನಿನ್ನ ಕೀರ್ತಿಯು ಇಡೀ ಜಗತ್ತನ್ನೇ ಪ್ರಕಾಶಿಸುವಂತೆ ಮಾಡಿದೆ.

Your glory pervades all four ages; your fame illumines the entire world.

ಸಾಧುಸಂತಕೇ ತುಮ ರಖವಾರೇ | ಅಸುರ ನಿಕಂದನ ರಾಮ ದುಲಾರೇ || ೩೦ ||

sadhusamtake tuma rakhavare | asura nikamdana rama dulare || 30 ||

ಅರ್ಥ · Meaning

ನೀನು ಸಾಧು-ಸಂತರನ್ನು ರಕ್ಷಿಸುವವನು ಮತ್ತು ರಾಕ್ಷಸರನ್ನು (ಅಸುರರನ್ನು) ನಾಶಮಾಡುವವನು. ನೀನು ಶ್ರೀರಾಮನಿಗೆ ಅತ್ಯಂತ ಪ್ರಿಯನಾದವನು.

Guardian of saints and sages, destroyer of demons, beloved of Rama.

ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ | ಅಸವರ ದೀನ್ಹ ಜಾನಕೀ ಮಾತಾ || ೩೧ ||

asta siddhi nava nidhi ke data | asavara dinha janaki mata || 31 ||

ಅರ್ಥ · Meaning

ಎಂಟು ಸಿದ್ಧಿಗಳನ್ನು ಮತ್ತು ಒಂಬತ್ತು ನಿಧಿಗಳನ್ನು ಯಾರಿಗಾದರೂ ನೀಡಬಲ್ಲ ಶಕ್ತಿ ನಿನಗಿದೆ. ಇಂತಹ ಮಹಾನ್ ವರವನ್ನು ನಿನಗೆ ಜಾನಕೀ ಮಾತೆಯಾದ ಸೀತಾದೇವಿಯು ನೀಡಿದ್ದಾಳೆ.

You bestow the eight siddhis and nine nidhis — a boon granted by Mother Janaki.

ರಾಮ ರಸಾಯನ ತುಮ್ಹರೇ ಪಾಸಾ | ಸದಾ ರಹೋ ರಘುಪತಿ ಕೇ ದಾಸಾ || ೩೨ ||

rama rasayana tumhare pasa | sada raho raghupati ke dasa || 32 ||

ಅರ್ಥ · Meaning

ರಾಮನಾಮವೆಂಬ ಔಷಧಿಯು (ರಸಾಯನ) ಸದಾ ನಿನ್ನ ಬಳಿಯಿದೆ. ನೀನು ಯಾವಾಗಲೂ ರಘುಪತಿಯಾದ ಶ್ರೀರಾಮನ ಪರಮ ಭಕ್ತನಾಗಿ (ದಾಸನಾಗಿ) ನೆಲೆಸಿದ್ದೀಯೆ.

You hold the essence of devotion to Rama; may you remain forever Raghupati's servant.

ತುಮ್ಹರೇ ಭಜನ ರಾಮ ಕೋ ಪಾವೈ | ಜನ್ಮ ಜನ್ಮ ಕೇ ದುಖ ಬಿಸರಾವೈ || ೩೩ ||

tumhare bhajana rama ko pavai | janma janma ke dukha bisaravai || 33 ||

ಅರ್ಥ · Meaning

ನಿನ್ನನ್ನು ಭಜಿಸುವುದರಿಂದ ಭಕ್ತರಿಗೆ ಶ್ರೀರಾಮನ ಕೃಪೆ ಲಭಿಸುತ್ತದೆ ಮತ್ತು ಅವರ ಜನ್ಮ ಜನ್ಮಾಂತರಗಳ ದುಃಖಗಳೆಲ್ಲವೂ ಮರೆತುಹೋಗುತ್ತವೆ (ದೂರವಾಗುತ್ತವೆ).

Singing of you, one finds Sri Rama and the sorrows of countless births fall away.

ಅಂತಕಾಲ ರಘುಪತಿ ಪುರ ಜಾಯೀ | ಜಹಾಂ ಜನ್ಮಿ ಹರಿಭಕ್ತ ಕಹಾಯೀ || ೩೪ ||

amtakala raghupati pura jayi | jaham janmi haribhakta kahayi || 34 ||

ಅರ್ಥ · Meaning

ನಿನ್ನ ಭಕ್ತರು ಅಂತ್ಯಕಾಲದಲ್ಲಿ ಶ್ರೀರಾಮನ ಪರಂಧಾಮವನ್ನು (ವೈಕುಂಠ) ಸೇರುತ್ತಾರೆ. ಅಲ್ಲಿ ಅವರು ಹರಿಭಕ್ತರೆಂಬ ಹೆಸರಿನಿಂದ ಶಾಶ್ವತವಾಗಿ ನೆಲೆಸುತ್ತಾರೆ.

At death one attains Raghuvara's own abode, born thereafter as Hari's devotee.

ಔರ ದೇವತಾ ಚಿತ್ತ ನ ಧರಯೀ | ಹನುಮತ ಸೇಯಿ ಸರ್ವಸುಖಕರಯೀ || ೩೫ ||

aura devata citta na dharayi | hanumata seyi sarvasukhakarayi || 35 ||

ಅರ್ಥ · Meaning

ಬೇರೆ ಯಾವುದೇ ದೇವತೆಗಳನ್ನು ಮನಸ್ಸಿನಲ್ಲಿ ಸ್ಮರಿಸದಿದ್ದರೂ ಸಹ, ಕೇವಲ ಹನುಮಂತನನ್ನು ಸೇವಿಸುವುದರಿಂದಲೇ ಭಕ್ತರು ಸಕಲ ಸುಖಗಳನ್ನು ಪಡೆದುಕೊಳ್ಳುತ್ತಾರೆ.

Turn your mind to no other deity: serving Hanuman one gains every happiness.

ಸಂಕಟ ಹರೈ ಮಿಟೈ ಸಬ ಪೀರಾ | ಜೋ ಸುಮಿರೈ ಹನುಮತ ಬಲವೀರಾ || ೩೬ ||

samkata harai mitai saba pira | jo sumirai hanumata balavira || 36 ||

ಅರ್ಥ · Meaning

ಶಕ್ತಿಶಾಲಿಯಾದ ಹನುಮಂತನನ್ನು ಯಾರು ಸ್ಮರಿಸುತ್ತಾರೋ, ಅವರ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಮತ್ತು ಎಲ್ಲಾ ದೈಹಿಕ ಹಾಗೂ ಮಾನಸಿಕ ನೋವುಗಳು (ಪೀಡೆಗಳು) ನಾಶವಾಗುತ್ತವೆ.

All affliction ends, all pain departs, for one who remembers the mighty Hanuman.

ಜೈ ಜೈ ಜೈ ಹನುಮಾನ ಗೋಸಾಯೀ | ಕೃಪಾ ಕರಹು ಗುರು ದೇವ ಕೀ ನಾಯೀ || ೩೭ ||

jai jai jai hanumana gosayi | krpa karahu guru deva ki nayi || 37 ||

ಅರ್ಥ · Meaning

ಇಂದ್ರಿಯಗಳನ್ನು ಗೆದ್ದ ಹನುಮಂತನೇ (ಗೋಸಾಯಿ), ನಿನಗೆ ಜಯವಾಗಲಿ. ಒಬ್ಬ ಸದ್ಗುರುವಿನಂತೆ ನನ್ನ ಮೇಲೆ ನಿನ್ನ ಕೃಪೆಯನ್ನು ತೋರು.

Victory, victory, victory to Lord Hanuman! Shower your grace upon me as the divine Guru.

ಯಹ ಶತವಾರ ಪಾಠ ಕರ ಜೋಯೀ | ಛೂಟಹಿ ಬಂದಿ ಮಹಾಸುಖ ಹೋಯೀ || ೩೮ ||

yaha satavara patha kara joyi | chutahi bamdi mahasukha hoyi || 38 ||

ಅರ್ಥ · Meaning

ಯಾರು ಈ ಚಾಲೀಸಾವನ್ನು ನೂರು ಬಾರಿ (ಶತವಾರ) ಪಠಿಸುತ್ತಾರೋ, ಅವರು ಸಂಸಾರವೆಂಬ ಬಂಧನದಿಂದ ಮುಕ್ತರಾಗಿ ಮಹಾನ್ ಸುಖವನ್ನು (ಮೋಕ್ಷವನ್ನು) ಪಡೆಯುತ್ತಾರೆ.

Whoever recites this a hundred times is freed from every bondage and gains supreme bliss.

ಜೋ ಯಹ ಪಢೈ ಹನುಮಾನ ಚಾಲೀಸಾ | ಹೋಯ ಸಿದ್ಧಿ ಸಾಖೀ ಗೌರೀಸಾ || ೩೯ ||

jo yaha padhai hanumana calisa | hoya siddhi sakhi gaurisa || 39 ||

ಅರ್ಥ · Meaning

ಯಾರು ಈ ಹನುಮಾನ್ ಚಾಲೀಸಾವನ್ನು ಓದುತ್ತಾರೋ ಅವರಿಗೆ ಸಕಲ ಕಾರ್ಯಗಳಲ್ಲಿ ಸಿದ್ಧಿ ಲಭಿಸುತ್ತದೆ. ಇದಕ್ಕೆ ಗೌರೀಪತಿಯಾದ ಶಿವನೇ ಸಾಕ್ಷಿ.

Whoever reads this Hanuman Chalisa attains fulfilment — Gauri's Lord himself bears witness.

ತುಲಸೀದಾಸ ಸದಾ ಹರಿ ಚೇರಾ | ಕೀಜೈ ನಾಥ ಹೃದಯ ಮಹ ಡೇರಾ || ೪೦ ||

tulasidasa sada hari cera | kijai natha hrdaya maha dera || 40 ||

ಅರ್ಥ · Meaning

ತುಲಸೀದಾಸರಾದ ನಾನು ಸದಾ ಶ್ರೀಹರಿಯ ಸೇವಕನಾಗಿದ್ದೇನೆ. ಎಲೈ ಹನುಮಂತನೇ, ನನ್ನ ಹೃದಯದಲ್ಲಿ ನೀನು ಶಾಶ್ವತವಾಗಿ ನೆಲೆಸು (ಡೇರಾ ಹಾಕು).

Tulsidas, ever the servant of Hari, prays: O Lord, make your dwelling in my heart.

ಸಮಾಪ್ತಿ ದೋಹಾ · Closing Doha

ಪವನತನಯ ಸಂಕಟ ಹರಣ ಮಂಗಳ ಮೂರತಿ ರೂಪ || ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ||

pavanatanaya samkata harana mamgala murati rupa || rama lakhana sita sahita hrdaya basahu sura bhupa ||

ಅರ್ಥ · Meaning

ಸಂಕಷ್ಟಗಳನ್ನು ಹರಿಸುವ ಪವನಪುತ್ರನೇ, ಮಂಗಳಕರವಾದ ರೂಪವನ್ನು ಹೊಂದಿರುವವನೇ, ದೇವತೆಗಳಿಗೂ ಅಧಿಪತಿಯಾದವನೇ! ನೀನು ಶ್ರೀರಾಮ, ಲಕ್ಷ್ಮಣ ಮತ್ತು ಸೀತಾದೇವಿಯೊಡನೆ ಸದಾ ನನ್ನ ಹೃದಯದಲ್ಲಿ ನೆಲೆಸಿರು.

O son of the wind, remover of calamity, embodiment of auspiciousness — dwell in my heart, O king among gods, together with Rama, Lakshmana and Sita.

|| ಶುಭಮಸ್ತು ||

Text compiled from traditional sources for devotional use. Spotted an error? Write to namaste@purohithconnect.com

You may also like

Frequently asked · ಪ್ರಶ್ನೋತ್ತರ

What is Hanuman Chalisa?

Hanuman Chalisa (ಹನುಮಾನ್ ಚಾಲೀಸಾ) — Tulasidas's forty verses on Hanuman with meaning under every verse — for Tuesdays and Saturdays.

When should Hanuman Chalisa be recited?

It is meant for regular recitation — woven into the daily morning or evening routine as nitya parayana.

Is Hanuman Chalisa available in Kannada?

Yes — this page gives the complete Hanuman Chalisa in Kannada script with English transliteration side by side, free to read and share.

© 2026 Purohith Connect · Built in Bengaluru, Karnataka — for India